ಸಹಕಾರಿ ಸಂಘದ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರಿಂದ ಕರಸೇವೆ
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಮ್ಮ ಸಂಘದ ಪರವಾಗಿ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಜೊತೆಗೂಡಿ ಒಂದು ದಿನದ ಕರಸೇವೆ ಮಾಡುವುದೆಂದು ನಿರ್ಧರಿಸಲಾಗಿ, ದಿನಾಂಕ 06.03.2026 ಶುಕ್ರವಾರದಂದು ಸಂಜೆ ಶ್ರಮದಾನದ ಪುಣ್ಯ ಕಾರ್ಯದಲ್ಲಿ ನಮ್ಮ ಸಂಘದ ಎಲ್ಲಾ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.
