ಆಲಂಕಾರು ಪ್ರಾ.ಕೃ.ಪ.ಸ ಸಂಘದ ಸಿಬ್ಬಂದಿ ಕುಕ್ಕ.ಪಿ ಸೇವಾನಿವೃತ್ತಿ – ಬೀಳ್ಕೊಡುಗೆ ಕಾರ್ಯಕ್ರಮ
ಆಲಂಕಾರು : ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದ ಕುಕ್ಕ ಪಿ ಯವರು ಮೆ.30 ರಂದು ಸೇವಾ ನಿವೃತ್ತಿಗೊಂಡಿದ್ದು. ಬೀಳ್ಕೊಡುಗೆ ಕಾರ್ಯಕ್ರಮ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಮೇಶ ಭಟ್ ಉಪ್ಪಂಗಳ ರವರು ಮಾತನಾಡಿ ಕುಕ್ಕ.ಪಿ ಯವರು ಸೇವಾವಧಿಯಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಡಳಿತ ನಡೆಸಿದ ಎಲ್ಲಾ ಆಡಳಿತ ಮಂಡಳಿ ಮತ್ತು ಉನ್ನತ ಮಟ್ಟದ ಸಿಬ್ಬಂದಿಗಳೊಂದಿಗೆ, ಸದಸ್ಯರೊಂದಿಗೆ , ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಸ್ನೇಹ ಮತ್ತು ನಗುವಿನೊಂದಿಗೆ ವ್ಯವಹರಿಸಿ ಸೇವೆಯಲ್ಲಿ ಪ್ರಾಮಾಣಿಕತೆಯನ್ನು ತೋರಿಸಿರುತ್ತಾರೆ ಎಂದು ತಿಳಿಸಿ ಕುಕ್ಕ .ಪಿ ಯವರ ಸೇವಾ ನಿವೃತ್ತಿ ಜೀವನವು ಸುಖಮಯವಾಗಲಿ ಎಂದು ಹಾರೈಸಿದರು.
ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು,ಸಂಘದ ನಿರ್ದೇಶಕ ಪದ್ಮಪ್ಪ ಗೌಡ,ಎಸ್.ಡಿ.ಸಿ.ಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್,ಸಹಾಯಕ ಕಾರ್ಯನಿರ್ವಹಣಾಧಿಕಾರಿ ರವಿರಾಜ್ ರೈ ಗುತ್ತುಪಾಲು ಪ್ರಬಂಧಕ ಲೋಕನಾಥ ರೈ ಕೇಲ್ಕ ರಾಮಕುಂಜ,ರಾಧಾಕೃಷ್ಣ ನಾಯ್ಕ್,ಆಶಾಲತಾ ರವರು ಕುಕ್ಕ.ಪಿ ಯವರ ಕರ್ತವ್ಯ ನಿಷ್ಠೆ ಯನ್ನು ಗುಣಗಾನ ಮಾಡಿ ಸೇವಾ ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಸೇವಾ ನಿವೃತ್ತರಾದ ಕುಕ್ಕ.ಪಿ ಯವರನ್ನು ಸಂಘದ ಮತ್ತು ಸಿಬ್ಬಂದಿಗಳ ವತಿಯಿಂದ ಅಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಸೇರಿ ಸನ್ಮಾನಿಸಿದರು. ನಂತರ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕುಕ್ಕ. ಪಿಯವರು ಕೃತಜ್ಞತೆ ಸಲ್ಲಿಸಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್.ಡಿ ಯವರು ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು,ಪ್ರಬಂಧಕರಾದ ಆನಂದ ಗೌಡ ಪಜಡ್ಕ ರವರು ಧನ್ಯವಾದ ಸಮರ್ಪಿಸಿದರು. ಸಂಘದ ನಿರ್ದೇಶಕರಾದ ಕೇಶವ ಗೌಡ,ಉದಯ ಎಸ್ ಸಾಲಿಯಾನ್, ಅಶೋಕ ಕೊಯಿಲ,ಗಾಯತ್ರಿ,ವಿಜಯ ಎಸ್, ಅಶೋಕ ಎಚ್,ಕುಂಞ ಮುಗೇರ, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.



