ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ಇದರ ಆಶ್ರಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಕಾರ್ಯಗಾರ ದೀನದಯಾಳು ರೈತ ಸಭಾಭವನ ನಡೆಯಿತು.

ಸಂಘದ ಅಧ್ಯಕ್ಷರಾದ ರಮೇಶ ಭಟ್ಟ ಉಪ್ಪಂಗಳ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಮಾತನಾಡಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಿದರೆ ರೈತರಿಗೆ ಇದರಿಂದ ಪ್ರಯೋಜನವಾಗುತ್ತದೆ. ಕೃಷಿಕರ ತೋಟದಲ್ಲಿ ಎಲೆಚುಕ್ಕಿರೋಗ, ಹಳದಿ ರೋಗ, ಬೇರುಹುಳದ ಬಾದೆಗಳು ಕೃಷಿಕರ ತೋಟದಲ್ಲಿ ಕಂಡು ಬಂದಂತಾಹ ಹಿನ್ನೆಲೆಯಲ್ಲಿ ರೈತರಿಗೆ ಮಾಹಿತಿ ಕಾರ್ಯಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಡಾ. ಕೇದಾರನಾಥ ವಿಜ್ಞಾನಿಗಳು, ಸಸ್ಯ ಸಂರಕ್ಷಣೆ, ಭಾ.ಕೃ.ಅ.ಪ- ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರು ಮಾಹಿತಿ ನೀಡಿ ಕೃಷಿಯನ್ನು ಅದಾಯದ ಮೂಲವಾಗಿ ಪರಿವರ್ತನೆ ಮಾಡುವ ಕೆಲಸವಾಗಬೇಕು ಈ ಬಗ್ಗೆ ಸಮಗ್ರ ಕೃಷಿಯನ್ನು ಅಳವಡಿಕೆ ಮಾಡಬೇಕೆಂದು ತಿಳಿಸಿ ಕೃಷಿಯಲ್ಲಿ ಬರುವ ರೋಗಗಳ ಬಗ್ಗೆ ಹತೋಟಿ ತರುವ ಬಗ್ಗೆ ಮಾಹಿತಿ ಸಭೆಗೆ ತಿಳಿಸಿದರು.

ಅತಿಥಿಗಳಾಗಿ ಕಿರಣ್ ಉಪಾಧ್ಯಾಯ ನಿರ್ದೇಶಕರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಗುರುಪ್ರಸಾದ್ ರೈ ಕೇವಳ ಪ್ರಗತಿಪರ ಕೃಷಿಕರು ತಮ್ಮ ತಮ್ಮ ಅನುಭವಗಳನ್ನು ತಿಳಿಸಿದರು ಸಂಘದ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ಧನ್ಯವಾದ ಸಮರ್ಪಿಸಿದರು. ಸಂಘದ ನಿರ್ದೆಶಕರಾದ ಕೇಶವ ಗೌಡ ಆಲಡ್ಕ, ಪದ್ಮಪ್ಪಗೌಡ .ಕೆ, ಆಶೋಕ ಕೊಯಿಲ ಅತಿಥಿಗಳನ್ನು ಸ್ವಾಗತಿಸಿ, ಸಂಘದ ಸಿಬ್ಬಂದಿ ಲೋಕನಾಥ ರೈ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು, ಪ್ರನಾದ್ ರೈ .ಯಂ ಪ್ರಾರ್ಥಿಸಿದರು, ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.