ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

When

November 14, 2025    
9:45 am - 11:00 am

Where

Alankar Primary agricultural credit cooperative society
Alankar, Kadaba, KARNATAKA, 574 285

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ ಭಟ್ ಉಪ್ಪಂಗಳರವರು ಸಂಘದ ಸಭಾಭವನದಲ್ಲಿ ಸಂಘದ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ನಮಗೆ ಸಮಾಜದಲ್ಲಿ ಕೆಲಸ ಮಾಡಲು ಪ್ರೇರಣೆ ಕೊಟ್ಟ ಹಿರಿಯರ ಮಾರ್ಗದರ್ಶನದ ಭಾಗವಾಗಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 2007ರಿಂದ ಕ್ಯಾಲೆಂಡರ್ ಮುದ್ರಿಸಿ ಸಂಘದ ವ್ಯಾಪ್ತಿಯ 6 ಗ್ರಾಮಗಳ ಪ್ರತಿ ಮನೆಮನೆಗೆ ಸಂಘ ಸಂಸ್ಥೆಗಳಿಗೆ, ಸಂಘದ ಸಿಬ್ಬಂದಿಗಳ ಮೂಲಕ ಕ್ಯಾಲೆಂಡರ್ ನ್ನು ವಿತರಿಸುತ್ತಿದ್ದೇವೆ. ಸಂಘದ ಮಹಾಸಭೆಯಲ್ಲಿ ಎಲ್ಲಾ ಸದಸ್ಯರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ, ಆದರೆ ಕ್ಯಾಲೆಂಡರ್ ನ್ನು ಸಂಘದ ವತಿಯಿಂದ ಪ್ರತಿ ಮನೆಗೆ ವಿತರಿಸುವ ಮೂಲಕ ಸಂಘದಲ್ಲಿ ದೊರೆಯುವ ಎಲ್ಲಾ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಿಳಿಸಲು ಸಾಧ್ಯವಾಗುತ್ತದೆ ಮತ್ತು ಸಂಘದ ಸದಸ್ಯರಿಗೆ ಮತ್ತು ಸಿಬ್ಬಂದಿಗಳಿಗೆ ನೇರವಾಗಿ ಮುಖತ: ಮಾತನಾಡಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲರಿಗೂ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಸಂಘದ ವ್ಯಾಪ್ತಿಯ 6 ಗ್ರಾಮದ ಪ್ರತಿ ಮನೆ ಮನೆಗಳಿಗೆ ಸಂಘದ ಸಿಬ್ಬಂದಿಗಳು ಭೇಟಿ ನೀಡಿ ಕ್ಯಾಲೆಂಡರ್ ವಿತರಿಸಿ, ಸಂಘದ ಸಾಲ ಸೌಲಭ್ಯಗಳ ಮಾಹಿತಿ ನೀಡಿ, ಸದಸ್ಯರ ಅವಶ್ಯಕತೆಗಳ ಮಾಹಿತಿಯನ್ನು ಸಂಘದ ಅಡಳಿತ ಮಂಡಳಿಗೆ ತರುವುದರ ಮೂಲಕ ಸಂಘವು ಪೂರಕ ಸ್ಪಂದನೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ಡಿ.ಯವರು ಸ್ವಾಗತಿಸಿ, ಧನ್ಯವಾದ ತಿಳಿಸಿದರು. ಸಂಘದ ನಿರ್ದೇಶಕರಾದ ಕೇಶವ ಗೌಡ ಆಲಡ್ಕ, ಆಶೋಕ ಕೊಯಿಲ, ಉದಯ ಸಾಲಿಯಾನ್, ಗಾಯತ್ರಿ, ರತ್ನಾ ಬಿ.ಕೆ, ವಿಜಯ ಎಸ್, ಪದ್ಮಪ್ಪ ಗೌಡ.ಕೆ, ಕುಂಞಮುಗೇರ, ಆಶೋಕ ಎಚ್, ಲೋಕೇಶ್ ಮತ್ತು ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.